Tuesday, February 12, 2008

ಭಾವಗಳು

ಅಗೊಮ್ಮೆ ಈಗೊಮ್ಮೆ ಬಂದು
ಬಿತ್ತಿ ಹೋಗುತ್ತಿದ್ದ ಭಾವಗಳೇಕೋ
ಮುನಿಸಿಕೊಂಡಂತಿವೆ.

ಇಲ್ಲವೆಂತಿಲ್ಲ, ಬರದೇ ಇರದಂತಿಲ್ಲ !
ಹೇಳಿಯೇ.... ಬರುತ್ತವೆ.
ಬಂದು ಕೂರುವ ಮುನ್ನವೇ
ತಮ್ಮೊಳಗೆ ನಾಲ್ಕು ಮಾತನಾಡಿ
ನನಗೊಂದು ಮಾತ ಹೇಳದೆ
ನಿರ್ಗಮಿಸುತ್ತವೆ.

ಬಿತ್ತುವ ಮುನ್ನ ಉಳುವ ನೆಲವ
ನೋಡುವಂತೆ..
ನನ್ನೆದೆ ಹೊಲವನ್ನೊಮ್ಮೆ ಹೊಕ್ಕು
ಬರಡೆಂದೋ ?,ಫಸಲು ಕಾಣದೆಂದೋ ?
ಹಸನಾದ ನೆಲವನರಸಿ ಹೊರಟಂತಿವೆ.


ಪ್ರೇರಣೆ : "ಬನ್ನಿ ಭಾವಗಳೇ, ಬನ್ನಿ ನನ್ನೆದೆಗೆ .."

7 comments:

Shiv said...

ಜಯಂತ್,

ಮೊದಲಿಗೆ ನಿಮಗೆ ಅಭಿನಂದನೆಗಳು :)
ನಿಮಗೆ ಒಳ್ಳೆಯದಾಗಲಿ

ಹೇಗಿದೆ ನಿಮ್ಮ ಹೊಸ ಜೀವನ?

ಈಗಲೂ ಭಾವಗಳು ಹೀಗೆ ಬಂದು ಹೋಗ್ತಾವೆಯೇ?

ಜಯಂತ್ said...

ತುಂಬಾ ದಿನದ ಬಳಿಕ ಈ ಕಡೆ ತಲೆ ಹಾಕಿದಿರಾ..?? [:)] ಇಲ್ಲ ಸಾರ್‍ ಇದು ಮುಂಚೆ ಬರೆದಿದ್ದು

chethan said...

ಚೆನ್ನಾಗಿದೆ. ನಿಮ್ಮ ಶೈಲಿ ನನಗೆ ತುಂಬಾ ಹಿಡಿಸುತ್ತದೆ :)

ಜಯಂತ್ said...

ಧನ್ಯವಾದಗಳು..ಚೇತನ್.. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..

sunaath said...

ಭಾವನೆಗಳ ಸ್ವಾಗತಕ್ಕೆ ಒಳ್ಳೇ ಸ್ವರೂಪವನ್ನೇ ಕೊಟ್ಟಿದ್ದೀರಲ್ಲಾ!

ಜಯಂತ್ said...

ಸುನಾಥ - ನಿಮ್ಮ ಕಮೆಂಟ್ ನೋಡಿ ಖುಷಿ ಆಯ್ತು..ಹೀಗೆ ಬಂದು ಹೋಗ್ತ ಇರಿ..

Manju said...

I am sure I had commented this earlier [:)] Anyway, very good one Jayant...