Saturday, April 26, 2008

ಪ್ರಶ್ನೆಗಳು - ಕವನ

ಇಲ್ಲೇ.. ಹೀಗೆ.. ಇರುತ್ತಿದ್ದೆ
ನೀ ಬರುವ ಮುನ್ನ.
ನಾನು,
ನನ್ನೊಡನೆ
ಉತ್ತರವಿಲ್ಲದ ಪ್ರಶ್ನೆಗಳು.

ನೀ ಬಂದವಳೇನೂ
ಮಿಂಚ ತರಲಿಲ್ಲ,
ಮಳೆಯ ತರಲಿಲ್ಲ.
ಕನಿಷ್ಠ... ತಂಪು
ಗಾಳಿಯಾದರೂ ಬೇಡವೇ ?
ಹೋಗಲಿ ಬಿಡು,
ಜೀವ-ಜೀವನಕ್ಕೆ
ಬೇಕಲ್ಲವೇ
ಒಲವು.
ಒಲವ ಹೊನಲು
ಹರಿದರೂ..,
ಬಗೆ
-ಹರಿಯಲಿಲ್ಲ
ಕಾಡುವ ಪ್ರಶ್ನೆಗಳು. ?

ನೀನೇ ಉತ್ತರವಲ್ಲವೆನಿಸಿ
ಮತ್ತೆ ಹುಡುಕುತಿರಲು..
ಗೋಡೆಗೊರಗಿ ಕೂತ
ನನ್ನ.. ಮುಂದೆ
ನಗುತ ನೀ ನಿಂತೆ.

11 comments:

ಬಾನಾಡಿ said...

ನಗುತ ನಿಂತವಳು
ಉತ್ತರಿಸಲಿಲ್ಲವೇಕೆ?
ಅವಳಿಗೆ ಪ್ರಶ್ನೆ ಅರ್ಥವಾಗಲಿಲ್ಲವೇ?
ಅಥವಾ ಅವಳೇ ಪ್ರಶ್ನೆಯೋ
ಅಥವಾ ಅವಳೇ ಉತ್ತರವೋ?

ಬಾನಾಡಿ said...

ನಗುತ ನಿಂತವಳು
ಉತ್ತರಿಸಲಿಲ್ಲವೇಕೆ?
ಅವಳಿಗೆ ಪ್ರಶ್ನೆ ಅರ್ಥವಾಗಲಿಲ್ಲವೇ?
ಅಥವಾ ಅವಳೇ ಪ್ರಶ್ನೆಯೋ
ಅಥವಾ ಅವಳೇ ಉತ್ತರವೋ?

ಜಯಂತ ಬಾಬು said...

ಇನ್ನೊಂದೆರಡು ಬಾರಿ ಓದಿ ನೋಡಿ..ನಿಮ್ಮ ಬ್ಲಾಗ್-ಬರಹ ಸೊಗಸಾಗಿದೆ.

Yogesh Bhat said...
This comment has been removed by the author.
Yogesh Bhat said...

ಗೆಲುವನ್ನ ಹುಡಿಕಿ ಹೊರಟಾಗ ಹಾಗೆ ಅನ್ಸುತ್ತೆ - ಎಷ್ಟು ಸಾರಿ ಗೆದ್ರೂ ಮತ್ತೇನೋ ಆಸೆ ( or ಹಾಗೆ ಉಳಿದುಬಿಡುವ ದುಃಖ) ಬಂದು ನಿಂತಿರುತ್ತೆ.... ನೊಡುವ ಇನ್ನೆಂಥ ಪ್ರಶ್ನೆಗಳು ಕಾದಿವೆ ಅಂತ....


ನನಗರ್ಥವಾದದ್ದು ಹೀಗೆ... :)
ಕವನ ಚೆನ್ನಾಗಿದೆ, ತುಂಬಾ ಚೆನ್ನಾಗಿದೆ

Manju said...

I wonder why I did not comment upon this earlier... or have I, perhaps on Orkut?

Nice poem Jayant, with good and effective undertones... way to go

Keep it up

Manju

Vivek said...

Dear blogger,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada

Manju said...

ನಿಮ್ಮ ಇತ್ತೀಚಿನ ಬರಹ ಏಪ್ರಿಲ್ ೨೬. ಮೆರವಣಿಗೆಯ ಭರದಲ್ಲಿ ಬರವಣಿಗೆ ಮರೆತಿಲ್ಲ ತಾನೆ? ;)

ಕನ್ನಡ ಹನಿಗಳು said...

ಪ್ರಿಯ ಆತ್ಮೀಯ ಕನ್ನಡ ಸ್ನೇಹಿತರೆ,

ನಿಮ್ಮ ಅಂತರ್ಜಾಲದ ಕವನಗಳು ಬಹಳ ಸುಂದರವಾಗಿದೆ.

ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

http://kannadahanigalu.com/

ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

ಹಾಗೆಯೇ ಸಾದ್ಯವಾದಲ್ಲಿ ನಿಮ್ಮಲ್ಲೂ ಕವನ, ಚುಟುಕ, ಕವಿತೆ, ಹಾಸ್ಯ ಮುಂತಾದವುಗಳಿದ್ದರೆ ನಿಮ್ಮ ಹೆಸರಿನಲ್ಲಿ ಪ್ರಕಟಿಸಿ, ಮತ್ತೆಲ್ಲಾ ಸ್ನೇಹಿತರಿಗೂ ತಲುಪುವಂತೆ ಮಾಡಿ.

ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

ಧನ್ಯವಾದಗಳೊಂದಿಗೆ.....
Kannadahanigalu Team
kannadajokes@gmail.com

ಜಯಂತ ಬಾಬು said...

@ಯೋಗೇಶ್ ಭಟ್ ಅವರೇ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು..ನಿಮ್ಮ ಕವನಗಳು ತುಂಬಾ ಸೊಗಸಾಗಿವೆ..ಮತ್ತೊಮ್ಮೆ ಕಮೆಂಟಿಸುವೆ.

@ಮಂಜು - ಸಾರ್‍ ಮೆರವಣಿಗೆಯು ಇಲ್ಲ ಬರವಣಿಗೆಯು ಇಲ್ಲ.. :( .. ಸದ್ಯಕ್ಕೆ orkut ನಲ್ಲಿ post ಮಾಡಿದ್ದ ಒಂದೆರಡು ಪೋಸ್ಟ್ ಮಾಡ್ತೀನಿ. ಬ್ಲಾಗ್ ವಿನ್ಯಾಸ ಬದಲಾಯಿಸಬೇಕು ಅಂತ ಸಾಕಷ್ಟು ದಿನದಿಂದ ಅನಿಸಿ.. ಏನೂ ಪೋಸ್ಟ್ ಮಾಡದೇ ಹಾಗೇ ಇದ್ದೆ.

charvaka said...

ಹೀಗೇ ಬ್ಲಾಗಿನಂಗಳದಲ್ಲಿ ಅಡ್ಡಾಡುತ್ತಾ ನಿಮ್ಮ ಬ್ಲಾಗಿಗೆ ಬಂದೆ. ಚೇತೋಹಾರಿಯಾಗಿದೆ. ನಿಮ್ಮ ಕವನಗಳು ಸೂಕ್ಷ್ಮವಾಗಿವೆ.

"ಒಲವ ಹೊನಲು
ಹರಿದರೂ..,
ಬಗೆ
-ಹರಿಯಲಿಲ್ಲ
ಕಾಡುವ ಪ್ರಶ್ನೆಗಳು. ?"

ಈ ಸಾಲುಗಳು ತುಂಬಾ ಇಷ್ಟವಾದುವು.

ಹಾಗೆಯೇ "ನೀನೇ ಉತ್ತರವಲ್ಲವೆನಿಸಿ ಮತ್ತೆ ಹುಡುಕುತ್ತಿರಲು... ನನ್ನ ಮುಂದೆ ನಗುತ ನೀ ನಿಂತೆ" ಬೇರೆ ಉತ್ತರಕ್ಕಾಗಿ ಹುಡುಕುತ್ತಿದ್ದರೆ ಮತ್ತೆ ನೀನೇ ನಿಂತೆ ಎಂದರೂ, ಉತ್ತರ ನಿಜಕ್ಕೂ ಬೇಕೇ, ನಾನು ಸಾಕಲ್ಲವೇ ಎಂಬ ಭಾವವನ್ನೂ ಧ್ವನಿಸುವ ಮೂಲಕ ಕವನಕ್ಕೊಂದು ಸುಂದರ ತಿರುವನ್ನು ಕೊಡುತ್ತವೆ.