Monday, September 15, 2008

ಏಕಾಂತ

ಏಕಾಂತವು
ಒಂಟಿತನವಲ್ಲ.
ಕಾಂತೆಯೊಡನಿದ್ದು
ಏಕಾಂತವುಂಟು.

ದಂತ ಗೋಪುರವೋ
ಸಂತನಂತಿರುವುದೋ
ಎಂದೇನೂ ಇಲ್ಲ.

ತೆರೆದುಕೊಳ್ಳದಂತ
ಹೊರಗಾಗಿ ನಿಲ್ಲುವಂತ
ಬಚ್ಚಿಟ್ಟದ್ದಲ್ಲ.

ಕಂಡದ್ದೆಲ್ಲ ಒಂದು,
ಕಾಣದ್ದೂ ಒಂದು
ಅ-
ನೇಕ
ವಿಲ್ಲದ "ಏಕಾಂತ".

1 comment:

ಮನಸ್ವಿ said...

ಕವಿತೆ ಸುಂದರವಾಗಿ ಮೂಡಿಬಂದಿದೆ