Thursday, May 07, 2009

ಬರೆಯುವ ತಲ್ಲಣ

ಬರೆಯುವ ತಲ್ಲಣ


ಇಂದು,ನೆನ್ನೆಯದೇನಲ್ಲ.
ಕಂಡದ್ದು,ಕಾಣದ್ದು
ಅರಿತೂ ಅರಿಯದ್ದು
ಪದಗಳಾಗದೇ ಅವಿತಿದ್ದು.

ಭಾವವೊಂದು ಬೆಳೆವುದು,
ನನ್ನೆದೆಯ ಬಗೆದು
ಕವನವಾಗೆ ನಲಿವುದು
ಕನವರಿಸಿದ ಕ್ಷಣಗಳೋ..?

ನೂರು ಹೇಳ ಹೊರಟರೂ
ನುಡಿದದ್ದೊಂದೆ.
ಅದೇ ತುಮುಲದ
ಮತ್ತೊಂದು ಮಗ್ಗಲು !

2 comments:

Manjunatha Kollegala said...

ಕಂಡದ್ದು,ಕಾಣದ್ದು
ಅರಿತೂ ಅರಿಯದ್ದು
ಪದಗಳಾಗದೇ ಅವಿತಿದ್ದು.

ಅವ್ಯಕ್ತ-ಅಮೂರ್ತಕ್ಕೆ ಒಳ್ಳೆಯ ಅಭಿವ್ಯಕ್ತಿ. good poem. ಮತ್ತೆ ನನ್ನ ಪ್ರಶ್ನೆ ಅದೇ. ನಿಮ್ಮ ಹೊಟ್ಟೆ ತುಂಬಿತೇ, ಬರೆಯುವುದು ನಿಂತಿತೇ :)

© ಹರೀಶ್ said...

nice

http://honnahani.blogspot.com/