ಚಂದ್ರ,ತಾರಾಮಂಡಲ.
ಬೆನ್ನ ಮೇಲೆ ಮಲಗಿ ನೆನೆದೆ,
ಯಾವ ತಾರೆ ನನ್ನದು ??
ಎಲ್ಲೋ ಕೇಳಿದಂತೆ ಭಾಸ
ಸತ್ತು ತಾರೆಯಾಗುವರಂತೆ
ನಾ ಸತ್ತು ತಾರೆಯಾದರೆ,
ಎಲ್ಲಿ ಕಾಣುವೆ,ಹೇಗೆ..?
ನನ್ನ ಅಮ್ಮನ ಅಮ್ಮ,ಅಪ್ಪ
ಅಪ್ಪನ ಅಪ್ಪ,ಅಮ್ಮ,ಒಂದಷ್ಟು ಬಳಗ..
ಯಾವ ತಾರೆಗಳಾಗಿಹರು,
ಕಾಣರೇಕೊ...?
ಮೊನ್ನೆ ಜಾರಿ ಬಿದ್ದ ಬೆಳಕ ತುಂಡು
ಅದ್ಯಾರದು?
ಭುವಿಯ ಮೇಲೆ ಆಸೆ ಕರಗದೆ..
4 comments:
ವ್ಹಾವ್..........
ತುಂಬಾ ಚನ್ನಾಗಿದೆ,
ಹಾಗೆ ಹುಡುಕುವಾಗ ನನ್ನ ಅಜ್ಜ ಅಜ್ಜಿ ಸಿಕ್ಕರೆ ಸ್ವಲ್ಪ ನನಗೂ ಹೇಳಿ ಆಯ್ತಾ!
ಮಣ್ಣಿನ ವಾಸನೆಯಿರುವ ಕವನ ;)
good one Jayant, keep it up
ಧನ್ಯವಾದಗಳು .. ಪ್ರದೀಪ್, ಹೇಳ್ತೇನೆ ಸಾರ‍್ :)
ಮಂಜುನಾಥ್ - ಸಾರ‍್ ಇದನ್ನು ಮೊದಲು ಕನ್ನಡ ಕವಿತೆ ಕತೆ ವಿಭಾಗದಲ್ಲಿ ಪೋಸ್ಟ್ ಮಾಡಿದ್ದೆ . ಸ್ವಲ್ಪ ಹಳೆಯ ಸರಕು :), Thanks sir
ಹಾಡು ಹಳೆಯದಾದರೇನು ಭಾವ ನವನವೀನ
Post a Comment