E-ಯುಗದ ಪರಿಚಯ
E-ಲೆಕ್ಟ್ರಾನಿಕ್ ಯುಗದಲ್ಲಿ ನನ್ನ ಕನ್ನಡ ಕವಿತೆ,ಹರಟೆ,ಅನುವಾದಗಳ ಪರಿಚಯ.
Saturday, August 07, 2010
ಜೀವಸೆಲೆ
ಚಿಗುರೆಲೆಗಳ ನಡುವೆ
ಹೂವೊಂದು ನಕ್ಕು
ಬಿಸಿಲಿಗೆ ಎದೆ ಚಾಚಿ
ಮಳೆಗೆ ನಸು ನಾಚಿ
ಚಳಿಯೊಡನೆ ಚರಮಗೀತೆ
ಯ ಹಾಡಿ...
ಬಲಿತ ಎಲೆಗಳೂ
ನೆಲವನ್ನಪ್ಪಿ
ಬೆತ್ತಲಾಗಿ ನಿಂತ
ಮರ
ಮತ್ತೆಲ್ಲಿಯ ಜೀವ ಸೆಲೆ ?
ಮತ್ತೊಂದು ಕಾಲಚಕ್ರಕೆ
ಸಜ್ಜಾದ ಮರಕ್ಕೆ ತನ್ನದೇ ನೆಲೆ.
0 ಟೀಕೆ ಟಿಪ್ಪಣಿಗಳೇನಾದ್ರು ..?:
Post a Comment
Newer Post
Older Post
Home
Subscribe to:
Post Comments (Atom)
0 ಟೀಕೆ ಟಿಪ್ಪಣಿಗಳೇನಾದ್ರು ..?:
Post a Comment