ಕ್ಷಮೆ ಇರಲಿ..
ನಿಮ್ಮಂತೇ ಮಾನವನೇ..!
ಅಡಿಗಡಿಗೆ ಎಡವಿ ಏಳುವೆ
ನುಡಿಗಳಲಿ ತೊದಲುವೆ
ಹಿಡಿದ ಕೈಗಳ ಒತ್ತುವೆ
ಮಿಡಿವ ಮನಕೆ ತುಡಿಯದಿರುವೆ,
ತಪ್ಪೆಂದು ತಿಳಿದೂ.. ತಿದ್ದಿಕೊಳ್ಳಲಾಗದೆ!
ಸರಿಯೆಂಬುದೆಲ್ಲ ಅನುಸರಿಸಲಾಗದೆ ,
ಪಡೆದ ಸುಖದಿ ತೃಪ್ತಿಯಾಗದೆ
ಕಳೆದದ್ದೇನೋ ? ಹುಡುಕಲಾಗದೆ
ಕ್ಷಮೆ ಇರಲಿ..
ನಿಮ್ಮಂತೇ ಮಾನವನೇ..!
3 comments:
ಅದ್ಯಾಕೆ ಕ್ಷಮೆ ಕೇಳ್ತಾ ಇದ್ದೀರಾ?
ಆದರೂ ಕವನ ಚನ್ನಾಗಿದೆ.
ಕೇಳಬೇಕಾಗುತ್ತೆ ಸಾರ‍್ :) ಧನ್ಯವಾದಗಳು
ಈಗ ನಿಮ್ಮನ್ನ ಯಾರು ಅದೆಲ್ಲಾ ಮಾಡ್ತೀರಿ ಅಂತ ಆಕ್ಷೇಪಿಸಿದರು, ಅದ್ಯಾಕೆ ಮಾತುಮಾತಿಗೂ "ನಿಮ್ಮಂತೆ, ನಿಮ್ಮಂತೆ" ಅಂತೀರಿ :)
Post a Comment