ಇಲ್ಲೊಬ್ಬ ತಿರುಕ,
ಕಂಡರೆ ಮರುಕ
ಸೂರೊಂದಿಲ್ಲವಗೆ.
ಮಳೆಗಾಲದಿ ರೈನ್ ಕೋಟ್
ಚಳಿಗಾಲದಿ ವಿಂಟರ‍್ ಕೋಟ್
ಕೈಲ್ಲೊಂದು ಸಿಗರೇಟ್
ಬಾಗಿದ ದೇಹ,ಬಗ್ಗಿದ ನೋಟ
ನಡೆಯುತ್ತಾನೆ ಇಲ್ಲಿಂದಲ್ಲಿ
ನೋಡಿದ್ದುಂಟು ಅಲ್ಲಿ ಇಲ್ಲಿ
ತಿನ್ನುವ ಅಂಗಡಿಗಳಲಿ
ಮಳಿಗೆಗಳ ಬಗಲಿನಲಿ
ಒಂದೊಮ್ಮೆ ಅನಿಸಿತ್ತು
ಪಾಪ!
ಮತ್ತೆ ಮತ್ತೆ ಹಾದಿಬದಿಯಲಿ
ನಡೆವ ಇವನ ಕಂಡಾಗ
ನನ್ನ ಆಲೋಚನೆ ಕಡೆದಾಗ
ಅನಿಸಿದ್ದು " ಆಹಾ! ಜೀವನ " !!
2 comments:
ಜಯಂತ್,
ಕೆಲವೊಂದು ಕೋನದಿಂದ ಅದು ಆಹಾ!ಜೀವನವೇ !
ಸರಳ ಮತ್ತು ಆಳವಾದ ಕವನ
ಅಂದಾಗೆ ಇದು ನಮ್ಮ ಇನ್ನೊಂದು ಬ್ಲಾಗಾವತಾರ
-ಪಾತರಗಿತ್ತಿ
ಧನ್ಯವಾದಗಳು ಸಾರ್
Post a Comment