ಸರಿ ನೋಡೋಣ ಬನ್ನಿ..
ಹಕ್ಕಿಗಳ ಹಾರಾಟ
ತರಕಾರಿ ಮಾರಾಟ
ಹಾಗೇ ನಡೆದಲ್ಲಿ ..
ಅವರೂ ಸಿಗಬಹುದು
ನೋಡಿ ನಗಬಹುದು
ನಿಲ್ಲಿಸಿ ನುಡಿಯಬಹುದು
"ಹೇಗಿದ್ದೀರಿ , ಎಲ್ಲ ಕ್ಷೇಮವೇ ?"
ನಿಮ್ಮ ಮಾತು ದೂರಾಗುವ ಮುನ್ನ
ಅವರು ಪಕ್ಕದವರೊಡನೆ ಏನೋ
ಹೇಳಿದ್ದು , ಕಿಸಿದು ನಕ್ಕಿದ್ದೂ
ಕಿವಿಗೆ ಬಿದ್ದರೂ..
ಬೀಳದಂತೆ ನಡೆಯೋಣ ..
ಅಲ್ಲೇ ಹಾಗೆ ಬೈಟು ಕಾಪಿ
ಹೀರುವಾಗ, ಎಂದಿನಂತೆ
ಅಂಗಡಿ ರಾಜು ಕೇಳಿಯಾನು
ಕೇಳಿದ್ರ ಸಾರ್ ಎಡ್ಡಿ ಸಮಾಚಾರ ?
ಸಣ್ಣದೊಂದು ನಗೆ ಜೊತೆಗೆ
"ಏ ಅದು ಬಿಡಿ.. ಇದ್ದದ್ದೇ "
ಅಂದುಬಿಡಿ..
ನಿಮ್ಮ ಪೇಪರ್ ಕೊಳ್ಳಿ,
ಬೇರೆಯದನ್ನು ಅಲ್ಲೇ ಓದಿ.
ಮತ್ತೊಂದು ದಿನಕ್ಕೆ ಸಜ್ಜಾಗಿ
ದಿನವಿಡೀ ಆಫೀಸು ಟ್ರಾಫಿಕ್ಕಿನಲ್ಲಿ
ನುಜ್ಜು ಗುಜ್ಜಾಗಿ ,
ಸಂಜೆ ಇಲ್ಲೇ ಕುಳಿತು ಹರಟೋಣ
ಅಂಗಡಿ ಬಾಗಿಲ ಹಾಕುವ ತನಕ..
ಮತ್ತೊಂದು ದಿನಕ್ಕೆ ತೆರೆ ಎಳೆಯುತ....
ಜಯಂತಬಾಬು
4 comments:
ನಾವು ಅಷ್ಟೇನೆ,
ಟ್ರಾಫಿಕ್ ನ ಹೋಗೆ ಕುಡಿಯುತ,
ಆಫೀಸ್ ನಲ್ಲಿ ಕೂರುತ,
ಅಲ್ಲಿ ಇಲ್ಲಿ ಸದ್ದು,
ನಮಗೆ ಕೇಳೆ ಇಲ್ಲ.
ಎಲ್ಲವು ದುಖಂತ್ಯ ಎನ್ನುವ ಮೊದಲೇ ನಿಮ್ಮ ಕವನ ಕಣ್ಣಿಗೆ ಬಿತ್ತು ನೋಡಿ. ತುಂಬಾ ಚೆನ್ನಾಗಿ ಬರ್ದಿದ್ದಿರಿ.
Thanks ಬಾಲು..ಬಂದು ಹೋಗ್ತಾ ಇರಿ.. ನಿಮ್ಮ ಬ್ಲಾಗ್ ಓದಿದೆ .. ಚೆನ್ನಾಗಿದೆ
good one da. liked it
:-)
malathi S
ತುಂಬಾ ಥ್ಯಾಂಕ್ಸ್.. ನಿಮ್ಮ ನೆನಪಿನ ಸಂಚಿ ನೋಡಿದೆ ..ಸೊಗಸಾದ ಬರಹಗಳು
Post a Comment