ಆ ಮಾಯಾ ಛಾಯೆಯಲಿ
ಈ ಮೋಹ ಪಾಶದಲಿ
ನಲಿವು ನೋವಿನಲಿ
ಏಳು ಬೀಳಿನಲಿ..
ಮರೆಯಾಗಿತ್ತೋ ಮರ್ಮ ?
ಕಲಿಸಲೆಂದೋ ಜೀವನಧರ್ಮ ..!!!
ದಿನಗಳುರಳಿ,
ಋತುವು ಮರಳಿ..,
ಹೊಸದು ಬರಲಿ
ಹಳತು ಅಗಲಿ..,
ಗೂಢ ನವಿರೆಳೆಯ ಚರಕ.. !
ತಿರುಗಿತದೋ ಚಕ್ರ!!
ಬರಲಿ ಬರಲಿ ಮತ್ತೆ ಬರಲಿ..
ಒಲವ ಸುಧೆಯಲಿ,
ಕಂಗೆಟ್ಟ ಕಡೆಯಲಿ..
ಬಟ್ಟ ಬಯಲಲಿ,
ತುತ್ತ ತುದಿಯಲಿ...
ಮತ್ತೆತ್ತ ನೋಡದಂತ ಅರಿವು....
ನಿತ್ಯ... ನಮ್ಮಲಿ ... !!!
ಜಯಂತಬಾಬು
2 comments:
happy to read this..:-) thanks
ಸೊಗಸಾಗಿದೆ ಸ್ವಾಮಿ. ಒಂದು ವರ್ಷದ ಮೇಲೆ ಗಮನಿಸುತ್ತಿದ್ದೇನೆ. ನೀವೂ ಅಷ್ಟೇ ಅಪರೂಪ ಬರೀತಿದೀರ ಬಿಡಿ :)
Post a Comment